Speaking to Renukamma, a Devadasi, Mother and an Activist
ಭಾರತೀಯ ಪರಂಪರೆಯಲ್ಲಿ ಹಿಂದು ಧಾರ್ಮಿಕತೆಯು ಭಾರತೀಯರ ಮೆದುಳನ್ನು ಬಹಳ ದಿನಗಳಿಂದ ತನ್ನ ಕೈಯಲ್ಲಿ ಅದುಮಿಟ್ಟುಕೊಂಡಿದೆ.ಅದರಲ್ಲೂ ಧರ್ಮದ ಆಧಾರದ ಮೇಲೆ ದಲಿತರನ್ನು.ಮಹಿಳೆಯರನ್ನು ಬಡವರನ್ನು ದೀನದುರ್ಬಲರನ್ನು ಮೊದಲಿನಿಂದಲು ಶೋಷಿತಲೆ ಬಂದಿದೆ.ಶೋಷಕ ಧರ್ಮವಾಗಿ ಬೆಳೆದ ಹಿಂದು ಧರ್ಮ.ತನ್ನಲ್ಲಿ ದೇವದಾಸಿಯೆಂಬ ಅಘೋಷಿತ ಕಾನೂನನ್ನು ಇಲ್ಲಿನ ದಲಿತ ಮಹಿಳೆಯರ ಬದುಕಿಗೆ ಮುಳ್ಳುಬೇಲಿಯಾಗಿ ಮಾಡಿದೆ.ಬಡತನದಿಂದ ಮದುವೆ ಮಾಡಿಕೊಡಲು ಹಣವಿಲ್ಲದಾಗ.ಅಂಗವಿಕಲಳಾಗಿ ಹುಟ್ಟಿ ಮದುವೆಯಾಗದೆ ಮನೆಯಲ್ಲೆ ಬಹಳ ದಿನಗಳ ಕಾಲ ಇದ್ದಾಗ.ಗಂಡುಮಕ್ಕಳಿಲ್ಲದೆ ಬರಿ ಹೆಣ್ಣು ಮಕ್ಕಳಿದ್ದಾಗ. ಮನೆಗೊಬ್ಬರು ಗಂಡಂತೆ ಇರಬೇಕೆಂದು.ದೇವರ ಹೆಸರಿನಲ್ಲಿ ದಲಿತ ಬಾಲೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಗ್ದರಿಗೆ ತಲೆಕೆಡಿಸಿ ದೇವದಾಸಿಯರನ್ನಾಗಿ ಮಾಡುತ್ತಾರೆ.ಹೀಗೆ ಹತ್ತುಹಲವಾರು ಕಾರಣಗಳಿಂದ ದೇವದಾಸಿಯರನ್ನಾಗಿ ಸೃಷ್ಟಿಸುತ್ತಾರೆ.
ಕರ್ನಾಟಕದ ಸವದತ್ತಿ ಯಲ್ಲಮ್ಮ.ಕೊಪ್ಪಳದ ಹುಲಿಗಿಯ ಹುಲಿಗೆಮ್ಮ.ಬಾಗಲಕೋಟದ ಬಾದಮಿ ಬನಶಂಕರಿ.ಉಚ್ಚಂಗಿದುರ್ಗದ ಉಚ್ಚಂಗೆಮ್ಮ.ಶಿವಮೊಗ್ಗದ ಚಂದ್ರಗುತ್ತಿ.ಹೀಗೆ ಹಲವಾರು ಧಾರ್ಮಿಕ ಕೇಂದ್ರಗಳು ದೇವದಾಸಿಯರ ಹುಟ್ಟಿಗೆ ಕಾರಣೀಭತವಾಗಿವೆ.ಗಂಡನಿಲ್ಲದೆ ಮಕ್ಕಳನ್ನು ಹೇರುವ ದೇವದಾಸಿಯರು ಸಮಾಜದಲ್ಲಿ ಸೂಳೆ.ಬಸವಿ.ಜೋಗಮ್ಮ.ಮಾತಂಗಿ.ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಾರೆ.ಇಂದಿಗೂ ಜೀವಂತವಿರುವ ಈ ಅನಿಷ್ಟ ಪದ್ದತಿಗೆ ಕೆಳ ಜಾತಿಯ ಮಾದಿಗ ಮಹಿಳೆಯರೆ ಹೆಚ್ಚಾಗಿ ಬಲಿಯಾಗಿದ್ದಾರೆ.ಸಮಾಜದಿಂದ ಅಪಮಾನ ಅವಮಾನ ಅನುಭವಿಸುತ್ತಿರುವ ಈ ದೇವದಾಸಿ ತಾಯಂದಿರ ಬದುಕಿನ ನೋವುಗಳು ತುಂಬಾ ಮನಕಲುಕುಂತೆ ತುಂಬಿವೆ.ದೇವದಾಸಿಯರ ಕಣ್ಣೀರಿಗೆ ಇಂದಿಗೂ ಕೊನೆಯಿಲ್ಲದಾಗಿವೆ.ಸರ್ಕಾರಗಳ ನಿರ್ಲಕ್ಷವೆ ಈ ಪದ್ದತಿ ಇಂದಿಗೂ ಜೀವಂತವಾಗಿದೆ.
ದೇವದಾಸಿಯಾಗಿ ಜೀವಿಸುತ್ತಾ ದೇವದಾಸಿ ಪದ್ದತಿಯ ವಿರುದ್ದ ತೊಡೆತಟ್ಟಿ ನಿಂತಿರುವ ಸಮಾಜಿಕ ಹೋರಾಟಗಾರ್ತಿ
ರೇಣುಕಮ್ಮ . ದಾವಣಗೆರೆ ಜಿಲ್ಲೆಯ ಕುಂದೂರು ಎಂಬ ಹಳ್ಳಿಯಲ್ಲಿ ತಂದೆ ಹನುಮಪ್ಪ ತಾಯಿ ಮಾಳವ್ವಳ ಮಗಳಾಗಿ ಜನಿಸಿದ್ದಾರೆ.ಹನುಮಪ್ಪ ಮಾಳವ್ವಗೆ ಏಳ ಜನ ಬರೀ ಹೆಣ್ಣುಮಕ್ಕಳು.ಎಲ್ಲರು ಮದುವೆ ಮಾಡಿಕೊಟ್ಟು ಕೊನೆಯ ಮಗಳಾದ ರೇಣುಕಮ್ಮಳನ್ನು ಮನೆಗೆ ಇರಿಸಿ ಯಲ್ಲಮ್ಮ ತಾಯಿಗೆ ಮುತ್ತು ಕಟ್ಟಿಸಿ ಬಸವಿಯನ್ನಾಗಿ ಬಿಟ್ಟರು.ಇಡೀ ಸಂಸರಾದ ಜವಾಬ್ದಾರಿನ್ನು ಗಂಡು ಮಗನಂತೆ ನಿಭಾಯಿಸಿದ ರೇಣುಕಮ್ಮಗೆ ಮೂರು ಜನ ಮಕ್ಕಳಾದರು ಎರಡು ಹೆಣ್ಣು ಒಂದು ಗಂಡು.
ಮಕ್ಕಳನ್ನು ಒದಿಸಲು ಭಿಕ್ಷೆ ಬೇಡಿ ಕೂಲಿ ಮಾಡಿ ಒದಿಸುತ್ತಿದ್ದಾಳೆ.ಸೆಕ್ಸ್ ವರ್ಕಿನ ದಾರಿ ತುಳಿಯದೆ ತಾನು ಕೂಲಿಕೆಲಸ ಮಾಡಿ ಬದುಕು ಕಟ್ಟಿಕೊಂಡು ದೇವದಾಸಿಯರನ್ನು ಒಗ್ಗೂಡಿಸಿ ಸ್ವಸಹಾಯ ಮಹಿಳಾ ಸಂಘಗಳನ್ನು ನಿರ್ಮಿಸಿ.ದೇವದಾಸಿ ತಾಯಂದಿರ ಹಾಗೂ ಮಕ್ಕಳ ನೋವನ್ನು ಸರ್ಕಾರಕ್ಕೆ ಮುಟ್ಟಿಸಲು ಅನೇಕ ಹೋರಾಟಗಳನ್ನು ಮಾಡುತ್ತಾ ತಮ್ಮ ಹಕ್ಕುಗಳನ್ನು ಕೇಳುವ ದಿಟ್ಟ ಸಾಮಾಜಿಕ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ದೇವದಾಸಿಯರಿಗೆ ಭೂಮಿ ಕೊಡಿಸುವುದು.ಸಾಲಸೌಲಭ್ಯ ಕೊಡಿಸುವುದು.ಮಾಸಾಶನ ಸ್ವಯಂ ಉದ್ಯೋಗಕ್ಕೆ ಸರ್ಕಾರದ ಸಹಾಯಧನ.
ದೇವದಾಸಿ ಪ್ರತ್ಯೇಕ ಮೀಸಲಾತಿ ಹೋರಾಟ.ನಿವೇಶನ.ಮನೆ ಹೀಗೆ ನಾನ ಹಕ್ಕುಗಳಿಗೆ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಾ ಕೆಲವು ಸ್ವಯಂಸಂಸ್ಥೆಗಳು.ಹಾಗೂ ಜನಪರ ಸಂಘಟನೆಗಳೊಂದಿಗೆ ಸೇರಿಕೊಂಡು ದೇವದಾಸಿ ನಿರ್ಮೂಲನೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ರೇಣುಕಮ್ಮ ಅನಕ್ಷರತೆಯಾದರು ದಲಿತ ಕಮ್ಮ್ಯೂನಿಸ್ಟ್ ಎಡಚಿಂತನೆಗಳನ್ನು ಹಾಗೂ ಸ್ತ್ರೀ ಚಿಂತನೆಗಳನ್ನು ಮೈಗೂಡಿಸಿಕೊಂಡು ಕೊರಳಿಗೆ ಕಟ್ಟಿದ್ದ ಮುತ್ತುಗಳ ಕಿತ್ತು ದೇವರ ಹಡಲಿಗೆಯನ್ನು ಮುರಿದು ಇದೆಲ್ಲಾ ಮೌಡ್ಯ ಗಂಡಸರು ತಮ್ಮ ತೀಟೆತೀರಿಸಿಕೊಳ್ಳಲು ಮಾಡಿದ ಕುತಂತ್ರ ಎಂದು ತಿಳಿದು ನೊಂದವರ ನೆರವಿಗೆ ನಿಂತಿದ್ದಾರೆ.ದಾವಣಗೆರೆ ದಲಿತ ಪ್ರಗತಿಪರ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿರುವ ರೇಣುಕಮ್ಮ ಹಳೆಸಂಪ್ರದಾಯವನ್ನು ಸುಟ್ಟು ವೈಜ್ಞಾನಿಕ ಯುಗದ ಸಾಮಾಜಿಕ ವಿಜ್ಞಾನಿಯಂತೆ ಕಂಡುಬರುತ್ತಾರೆ.ಬಡವರ ದೀನದುರ್ಬಲರ ನೋವಿಗೆ ಸದಾ ಮಿಡಿಯುವ ರೇಣುಕಮ್ಮ ಸಂದರ್ಶನದಲ್ಲಿ ತಮ್ಮ ಅನೇಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
1) ನಿಮ್ಮನ್ನು ದೇವದಾಸಿಯಾಗಿ ಮಾಡಿದ್ದು ಏಕೆ…?
ರೇ::-ಅದೊಂದು ದೊಡ್ಡ ಕೃತ್ಯ. ನನಗೆ ಬುದ್ದಿನೆ ಬಂದಿರಲಿಲ್ಲ ಅಸ್ಪಷ್ಟ ನೆನಪು ಏಳರಿಂದ ರಿಂದ ಏಂಟು ವರ್ಷ ಅನಿಸುತ್ತೆ ಚಿಕ್ಕ ಹುಡುಗಿಯನ್ನೆ ಬಸವಿಯಾಗಿ ಮಾಡಿದ್ದರು.ಕಾರಣ ನಮ್ಮವ್ವಗೆ ಏಳು ಜನರು ಹೆಣ್ಣುಮಕ್ಕಳೆ ಆರು ಜನರನ್ನು ಮದುವೆ ಮಾಡಿಕೊಟ್ಟರು ಏಳನೆಯವಳು ನಾನೆ ಗಂಡುಮಕ್ಕಳಿಲ್ಲದ ಮನೆ.ಕೊನೆಗಾಲದಲ್ಲಿ ತಂದೆತಾಯಿ ನೋಡಲು ಬೇಕಾಗುತ್ತದೆ ಎಂದು ಊರು ಗೌಡನ ಮಗ “ಮುರುಗೇಂದ್ರಣ್ಣ” ಹೇಳಿದ್ದನಂತೆ ಆಗ ಇದು ಸರಿನೆ ಎಂದು ತಿಳಿದು ನನ್ನನ್ನು ಯಲ್ಲಮ್ಮನ ಗುಡ್ಡಕ್ಕೆ ಕರೆದೋಗಿ ಪೂಜಾರಿಯಿಂದ ಮುತ್ತುಕಟ್ಟಿಸಿರು.ಅನಂತರ ಮುತ್ತುಕಟ್ಟಿಸಿಕೊಂಡು ನಾಲ್ಕು ವರ್ಷವಾದಮೇಲೆ ಮೈನೆರೆದೆ.ಮೈನೆರೆದ ಸಂಪ್ರದಾವೆಲ್ಲ ಮುಗಿದ ಮೇಲೆ ಗೌಡರ ಮುರುಗೇಂದ್ರಪ್ಪ ಸೀರೆ ತಾಳಿ ಹಾಗೂ ಒಂದುಸಾವಿರ ದುಡ್ಡು ತಂದು ನನಗೆ ತಾಳಿ ಕಟ್ಟಿದ .ಹಣವನ್ನ ತಂದೆ ತೆಗೆದುಕೊಂಡರೆ ಸೀರೆಯನ್ನು ತಾಯಿ ತಗೊಂಡಳು ತಾಳಿಮಾತ್ರ ನನ್ನ ಕೊರಳಿಗೆ ಬಿತ್ತು.
2) ದೇವದಾಸಿ ಪದ್ದತಿ ತಪ್ಪು ಅಂತ ಅನಿಸಿದ್ದು ಯಾವಾಗ.
ರೇ::-ನನಗೆ ತಾಳಿ ಕಟ್ಟಿದ ಗೌಡನ ಮಗ ಕೆಲವೆ ತಿಂಗಳು ನನ್ನ ಅನುಭವಿಸಿ ತನ್ನ ಚಟ ತೀರಿದ ಮೇಲೆ ಇನ್ನೊಬ್ಬ ದೇವದಾಸಿಯೊಂದಿಗೆ ಕೂಡಲು ಹೋದವನು ಮತ್ತೆ ಬರಲೆ ಇಲ್ಲ.ಇತ್ತ ತಂದೆ ತಾಯಿ ತೀರಿ ಹೋಗಿದ್ದರು ಮನೆಯಲ್ಲಿ ಒಬ್ಬಳೆ ಇರುತ್ತಿದ್ದೆ.ಊರಿನ ಪ್ರಮುಖರೆಲ್ಲಾ ನನ್ನ ಕಾಮದ ಕಣ್ಣಿನಿಂದಲೆ ನೋಡುತ್ತಿದ್ದರು.ಊರಿನ ಹೆಂಗಸರೆಲ್ಲಾ ಮಾತುಮಾತಿಗು ಸೂಳೆ .ಮಿಂಡ್ರಿ.ಹಾದ್ರಗಿತ್ತಿ.ಎಂದು ಹೀಯಾಳಿಸುತ್ತಿದ್ದರು.ಚಿಕ್ಕಚಿಕ್ಕ ವಿಷಯಕ್ಕು ಜನರು ಬಟ್ಟೆಬಿಚ್ಚಿ ಕೂದಲಿಡಿದು ಎಳೆದು ಹೊಡೆಯುತ್ತಿದ್ದರು. ಆದರೆ ಯಾರು ಸಹಾಯಕ್ಕೆ ಬರುತ್ತಿರಲಿಲ್ಲ.ಒಂಟಿಯಾದ ನಾನು ಕಣ್ಣೀರಲ್ಲೆ ಕೈ ತೊಳೆಯುತ್ತಿದ್ದೆ.ನೋವನ್ನು ಹಂಚಿಕೊಳ್ಳಲು ಯಾರು ಇರಲಿಲ್ಲ ಆಗ ಈ ದೇವದಾಸಿಯೆಂಬುದು ನೀಚತೆ ಮತ್ತು ಅನಿಷ್ಟತೆ ಎಂದು ನನಗನಿಸಿತು.ದೇವದಾಸಿಯೆಂದರೆ”ಏನು ತಿಳಿಯದ ಮುಗ್ದಬಾಲೆಯರನ್ನು ಅನಭೋಗಿಸಲು.ನಮ್ಮ ದೇಹದ ಮಾಂಸ ತಿನ್ನುವ ನರರೂಪ ರಾಕ್ಷಸರ ಧಾರ್ಮಿಕ ಅತ್ಯಾಚಾರ “”
3) ನೀವು ಜೀವನ ನಿಭಾಯಿಸಲು ಏನು ಮಾಡುತ್ತಿದ್ದೀರಿ..?
ರೇ::-ಹೊಲ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ.ಬಿಡುವಿದ್ದಾಗ ಬುಟ್ಟಿ ಎಣೆಯುತ್ತಿದ್ದೆ.ಸೌವ್ಕರರ ಮನೆಯಲ್ಲಿ ಪಾತ್ರೆ ಬಟ್ಟೆ ತೊಳೆಯುತ್ತಿದ್ದೆ. ಅಂದು ಮಂಗಳವಾರ ಶುಕ್ರವಾರ ದೇವಿಯ ಹಡಲಿಗೆ ಹೊತ್ತು ಬಿಕ್ಷೆ ಬೇಡುತ್ತಿದ್ದೆ .ಈಗ ನಿಲ್ಲಿಸಿದ್ದೇನೆ.ಸ್ವಾಲಂಬನೆಯಿಂದ ಕೂಲಿ ಮಾಡಿ ಜೀವಿಸುತ್ತೇನೆ.ದೇಹ ಮಾತ್ರ ಮಾರಿಕೊಳ್ಳಲ್ಲ.ಬಹಳ ಜನರು ನನ್ನ ದುಡಿಯಲು ಎಲ್ಲೆಲ್ಲಿಗೊ ಕರೆದರು ನಾನು ಹೋಗಲಿಲ್ಲ .ನನಗೆ ಅದರಲ್ಲಿ ಆಸಕ್ತಿ ಇಲ್ಲ.
4) ದೇವದಾಸಿಯ ಸುಧೀರ್ಘ ಅನುಭ ಹೇಗಿತ್ತು?
ರೇ::-ಮುಳ್ಳಿನ ಹಾಸಿಗೆಯಲ್ಲಿ ಮಲಗಿ ವಿಷಪೂರಿತ ಹಾವುಗಳಿಂದ ಕಚ್ಚಿಸಿಕೊಂಡು ಹೊಟ್ಟೆಗೆ ಚೂಪಾದ ಚಾಕುವಿನಿಂದ ಚುಚ್ಚಿಸಿಕೊಂಡು ನೋವಿನಿಂದ ನರಳಾಡುವಂತೆ ನನ್ನ ಬದುಕು.
ನನ್ನ ಗೌಡನ ಮಗ ಮುರುಗೆಪ್ಪ ತಾಳಿಕಟ್ಟಿ ಬಿಟ್ಟೋದ ಮೇಲೆ ಪಕ್ಕದೂರಿನ ಮುಸ್ಲೀಂನೊಂದಿಗೆ ಮಾತ್ರ ಸಂಬಂಧ ಇಟ್ಟುಕೊಂಡಿದ್ದೆ.ಮೂರು ಮಕ್ಕಳಿದ್ದಾರೆ.ನನ್ ಲೈಪಲ್ಲಿ ಸೆಕ್ಸ್ ವರ್ಕ್ ಮಾಡಲೆ ಇಲ್ಲ.ಬೆಳಿಗ್ಗೆ ಹೊಲಕ್ಕೆ ಹೋದರೆ ಸಂಜೆ ಬರ್ತಿನಿ ಅಲ್ಲಿ ಬೆವರು ಸುರಿಸಿ ದುಡಿತಿನಿ.ಆದರು ಈ ಸಮಾಜ ನನ್ನ ಸೂಳೆಯಂತೆ ಸ್ವೀಕರಿಸುತ್ತೆ.ಸಣ್ಣಪುಟ್ಟ ವಿಷಯಗಳಿಗೆ ಮನೆಯೊಳಗೆ ನುಗ್ಗಿ ನನ್ನ ಹೊಡೆದರು ಕೇಳುವವರಿರಲಿಲ್ಲ.ಹೇಳುವವರಿಲ್ಲ.ಮಕ್ಕಳಿಗೆ ಕೆಟ್ಟಪದಗಳಿಂದ ಬೈದು ಹೊಡಿತರೆ.ನಾನು ನನ್ನ ಮಕ್ಕಳು ಅಸಹಾಯಕರಾಗಿ ಬದುಕಿದ್ದೇವೆ.ಇತ್ತ ನನ್ನ ಗಂಡನಂತಿರುವ ವ್ಯಕ್ತಿ ತಿಂಗಳಿಗೆ ಒಂದೆರೆಡು ಬಾರಿ ಮಾತ್ರ ಬಂದು ಹೋಗುತ್ತಾನೆ.ದುಡ್ ಕೊಡಲ್ಲ ಏನು ಇಲ್ಲ ನನ್ನ ಹತ್ತಿರ ಇದ್ದ ದುಡ್ಡನ್ನೆ ಕಸಿದುಕೊಂಡೋಗ್ತಾನೆ.ಇವಾಗ ಅವನನ್ನು ತುಂಬಾ ದೂರ ಇಟ್ಟಿನಿ ಬರ್ತಿಲ್ಲ.ಸಮಾಜಕ್ಕು ಹೆದರ್ತಿಲ್ಲ ತಿರುಗಿ ಬಿಳ್ತಿನಿ.ಹೆಚ್ಚು ಕಡಿಮೆಯಾದ್ರೆ ಪೋಲಿಸ್ಗೆ ಮಾಹಿತಿ ಮುಟ್ಟಿಸ್ತಿನಿ.ನಮ್ಮೂರಿನ ಎಲ್ಲಾ ದೇವದಾಸಿಯರನ್ನು ಒಗ್ಗೂಡಿಸಿ ನಮ್ಮ ಮೇಲೆ ನಡೆವ ದೌರ್ಜನ್ಯ ವಿರುದ್ದ ಹೋರಾಡ್ತಿನಿ.ಒಬ್ಬ ಮಗಳನ್ನು ಇಂಜಿನಿಯರಿಂಗ್ ಒದಿಸಿನಿ.ಇನ್ನೊಬ್ಬ ಮಗಳನ್ನು ಬಿಎಸ್ಸಿ ಒದುಸ್ತಾ ಇದಿನಿ.ಮಗ ಬೆಂಗಳೂರಲ್ಲಿ ಬಿಕಾಂ ಮಾಡ್ತಾ ಇದ್ದಾನೆ.ನನಗೆ ಎಷ್ಟು ನೋವಾದ್ರು ನನ್ನ ಮಕ್ಕಳನ್ನು ಕೂಲಿನಾಲಿ ಮಾಡಿ ಒದಿಸಿದ ತೃಪ್ತಿ ನನಗಿದೆ.
5) ಕಮ್ಯೂನಿಸ್ಟ್ ಚಿಂತನೆ ಹಾಗೂ ಸ್ತ್ರೀ ವಾದಿ ಚಿಂತನೆಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಿದವು..?
ರೇ::-ಅಂದು ದಾವಣಗೆರೆಯಲ್ಲಿ ಪಂಪಾಪತಿ ಕಮ್ಯೂನಿಸ್ಟ್ ಪಕ್ಷದಿಂದ ಗೆದ್ದು ಎಮ್.ಎಲ್.ಎ ಆಗಿದ್ದರು.ನಗರಸಭೆಯ ಅಧ್ಯಕ್ಷರಾಗಿ ಇಂದಿನ ಕಾರ್ಮಿಕ ಹೋರಾಟಗಾರ ಎಚ್.ಕೆ.ರಾಮಚಂದ್ರಪ್ಪರಾಗಿದ್ದರು.ಇವರು ದಾವಣಗೆರೆಯಲ್ಲಿ ಮೂರುದಿನದ ತರಬೇತಿ ಶಿಬಿರ ಮಾಡಿದ್ದರು.ನಾನು ಮಹಿಳಾ ಸ್ವಾ ಸಹಾಯ ಸಂಘ ಕಟ್ಟಿ ಮಹಿಳೆಯರನ್ನು ಒಂದುಗೂಡಿಸುವ ಹಾಗೂ ಹೋರಾಡುವ ಕೆಲಸಗಳು ಇವರಿಗೆ ಗೊತ್ತಾಗಿ ನನ್ನನ್ನು ಈ ಶಿಬಿರಕ್ಕೆ ಕರೆದೋಯ್ದರು.ಅಲ್ಲಿನ ಸೈದ್ದಾಂತಿಕ ಚರಿತ್ರೆಗಳು.ದೇಶದ ಬಡವರು ಬದುಕುವ ರೀತಿನೀತಿಗಳು.ಉಳ್ಳವರು ಮತ್ತು ಇಲ್ಲದವರ ವ್ಯತ್ಯಾಸ. ಸಮಸ್ಯಗಳಿಗೆ ಉತ್ತರಗಳು ಹೀಗೆ ನಾನ ವಿಚಾರಗಳಿಂದ ನಾನು ಪ್ರಭಾವಿತಳಾದೆ.ಹೊಸ ಮನುಷ್ಯಳಾಗಿ ನಿರ್ಮಾಣಗೊಂಡೆ.ದೇವರಿಲ್ಲವೆ ಇಲ್ಲ ಎಂದು ತೀರ್ಮಾನಿಸಿ ಚಿಕ್ಕವಳಿಂದ ನನ್ನ ನೇಣು ಹಗ್ಗದಂತೆ ಬಿಗಿದು ಬದುಕನ್ನು ಬಂಧಿ ಮಾಡಿದ್ದ ಕೊರಳಿಗೆ ಕಟ್ಟಿದ್ದ ಮುತ್ತುಗಳನ್ನು ಕಿತ್ತು ಬಿಸಾಡಿ.ಪಡಲಿಗೆಯನ್ನು ಮುರಿದು ಬಿಸಾಕಿ.ಜನಪರ ಹೋರಾಟಕ್ಕೆ ನನ್ನನ್ನೆ ನಾನು ತೊಡಗಿಸಿಕೊಂಡೆ.ಯಾರು ನನ್ನ ಸೂಳೆಯೆಂದು ಕರೆದು ಅವಮಾನಿಸುತ್ತಿದ್ದರೊ ಅವರೆ ನನಗೆ ಶಾಲುಹಾರ ಹಾಕಿ ಸನ್ಮಾನಿಸುತ್ತಿದ್ದಾರೆ.ಯಾರು ನನ್ನ ಬಟ್ಟೆ ಬಿಚ್ಚಿ ಹೊಡೆದರೊ ಅವರೆ ನನ್ನ ಬಳಿಬಂದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತಿದ್ದಾರೆ.ಕಾಲಚಕ್ರ ಎಲ್ಲರಿಗು ಎಲ್ಲರ ಪರವಾಗಿಯೂ ನಿಲ್ಲುತ್ತದೆ.ನಾವು ಕಾಯಬೇಕು ಅಷ್ಟೆ.ಜನಪರ ಹೊರಾಟದೊಂದಿಗೆ ಬದುಕು ಸಾಗಿಸುತ್ತಿದ್ದೇನೆ.
6) ಸರ್ಕಾರದ ಸೌಲಭ್ಯಗಳು ದೇವದಾಸಿಯರಿಗೆ ಸಿಕ್ಕಿವೆಯೆ..?
ರೇ::-ಅಯ್ಯೊ ಅದೊಂದು ಕುರುಡು ಸರ್ಕಾರ. ಮಸಾಶನ ತಿಂಗಳಿಗೆ ಒಂದುವರೆ ಸಾವಿರ ಕೊಡ್ತಾರೆ .ದೇವದಾಸಿ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ಕೊಡ್ತಿದೆ.ಇನ್ನು ಕೆಲವರಿಗೆ ಕೊಡ್ತಿಲ್ಲ.ಸ್ವಯಂ ಉದ್ಯೋಗ ಕೈಗೊಳ್ಳಲು ಕೇವಲ 50 ಸಾವಿರ ಕೊಡ್ತಿದೆ ಅದರಲ್ಲಿ ಹತ್ತು ಸಾವಿರ ಮಾತ್ರ ಸಬ್ಸಿಡಿ ಇನ್ನುಳಿದಿದ್ದು ಸಾಲ.ಈ ಬ್ಯಾಂಕನೋರು ನೂರೊಂದು ನಿಯಮ ಹೇಳಿ ಲೋನೆ ಕ್ಯಾನ್ಸಲ್ ಮಾಡ್ತಾರೆ.ಸುಮ್ಮನೆ ದೇವದಾಸಿಯರಿಗೆ ಸಹಾಯ ಮಾಡ್ತಿವಿ ಅಂತ ಸುಳ್ಳೇಳಿ ಈ ಎನ್ ಜಿಒ ದವರು ಸರ್ಕಾರಗಳ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ.ಸರ್ಕಾರದ ಅಧಿಕಾರಿಗಳು ಸೌಲಭ್ಯಗಳನ್ನು ಕೊಡದೆ ನಮ್ಮ ಹಣವನ್ನು ಮಹಿಳಾ ನಿಗಮಕ್ಕೆ ವಾಪಸ್ಸು ಕಳಿಸ್ತಾ ಇದ್ದಾರೆ.ಹೊಲ ಇಲ್ಲ ಮನೆಯಿಲ್ಲ ಇವತ್ತಿಗು ಗುಡಿಸಲಿನಲ್ಲೆ ಅದೆಷ್ಟು ದೇವದಾಸಿಯರು ಬದುಕುತ್ತಿದ್ದಾರೆ.ಜನಪ್ರತಿನಿಧಿಗಳು ಭರವಸೆ ಕೊಟ್ಟು ಚುನಾವಣೆಯಲ್ಲಿ ಗೆಲ್ಲುತ್ತಾರೆ ಆದರೆ ಏನು ಸಹಾಯ ಮಾಡಲ್ಲ.ನಮಗೆ ತಿಂಗಳ ಮಸಾಶನ ಸಿಕ್ಕಿದ್ದು ಸಣ್ಣಪುಟ್ಟ ಸೌಲಭ್ಯಗಳು ಸಿಕ್ಕಿದ್ದು ನಮ್ಮ ಬಹಳ ವರ್ಷದ ಹೋರಾಟದ ಪ್ರತಿಫಲವಾಗಿದೆ.
7)ದೇವದಾಸಿ ಪದ್ದತಿ ಸಂಪೂರ್ಣ ನಿಷೇಧವಾಗಿದೆಯೆ..?
ರೇ::-ಇಲ್ಲ ಸಂಪೂರ್ಣವಾಗಿ ಅದು ನಿಂತಿಲ್ಲ.ಕದ್ದುಮುಚ್ಚಿ ಇಂದಿಗೂ ಮುತ್ತು ಕಟ್ಟುತ್ತಿದ್ದಾರೆ.ಉಚ್ಚಂಗಿ ದುರ್ಗದ ಗುಡ್ಡದ ಮೇಲೆ ನಡೆವ ಹಬ್ಬ ಹುಣಿಮೆ ಹಾಗೂ ಶುಕ್ರವಾರ ಮಂಗಳವಾರದಲ್ಲಿ ಯಾರಿಗೂ ಮುಚ್ಚುಮರೆಯಿಲ್ಲದೆ ದೇವದಾಸಿಯರನ್ನಾಗಿಸುತ್ತಿದ್ದಾರೆ.ಸರ್ಕಾರದವರು ಬಿಗಿ ರೂಲ್ಸ್ ಗಳನ್ನು ಮಾಡಿಲ್ಲ.ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ.ಈ ಪದ್ದತಿ ಒಂದು ಅಘೋಷಿತ ಕಾನೂನಂತೆ ತಲತಲಾಂತರಗಳಿಂದ ಇಂದಿಗೂ ಮುಂದುವರೆದುಕೊಂಡು ಬರುತ್ತಿದೆ.ಈ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಪ್ರತಿ ಹಳ್ಳಿಹಳ್ಳಿಯಲ್ಲಿ ದೇವದಾಸಿಯರು ಸಿಗುತ್ತಾರೆ ಮತ್ತು ವರ್ಷವರ್ಷಕ್ಕೆ ಹೆಚ್ಚಾಗುತ್ತಿದ್ದಾರೆ.
8) ಪ್ರಸ್ತುತ ನಿಮ್ಮ ಹೋರಾಟ ಹೇಗಿದೆ…?
ರೇ::-ನನ್ನ ಹೋರಾಟ ಕೇವಲ ದೇವದಾಸಿ ಮಹಿಳೆಯರಿಗೆ ಮಾತ್ರ ಸೀಮಿತಗೊಂಡಿಲ್ಲ.ನಿರ್ಗತಿಕರಿಗೆ .ಬಿಕ್ಷುಕ ಮಹಿಳೆಯರಿಗೆ.ಚಿಂದಿ ಆಯುವವರಿಗೆ.ದಲಿತರ ಮೇಲಿನ ದೌರ್ಜನ್ಯಗಳಿಗೆ.ದಲಿತ ಮಹಿಳೆಯರ ಅತ್ಯಾಚಾರ ಕೊಲೆಗಳಿಗೆ.ಅಲ್ಪಸಂಖ್ಯಾತ ಸಮುದಾಯದ ಮೇಲೆ ದೌರ್ಜನ್ಯಗಳು ನಡೆದಾಗ.ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಬಗ್ಗೆ.ಕಾರ್ಮಿಕರ ಪರವಾಗಿ.ನೊಂದ ಮಹಿಳೆಯರ ಪರವಾಗಿ.ವ್ಯವಸ್ಥೆಯ ದುರ್ನೀತಿಗಳು.ದುರಾಡಳಿತ.ಕೋಮವಾದ.ಜಾತಿವಾದ ಹೀಗೆ ಹತ್ತುಹಲವಾರು ಹೋರಾಟಗಳನ್ನು ಮಾಡುತ್ತೇನೆ.ನನ್ನ ಬದುಕನ್ನ ಸಂಪೂರ್ಣವಾಗಿ ಹೋರಾಟಕ್ಕೆ ಮೀಸಲಿಟ್ಟಿದ್ದೇನೆ.
9) ಸರ್ಕಾರಕ್ಕೆ ನಿಮ್ಮ ಬೇಡಿಕೆಗಳೇನು..?
ರೇ::-ಎಲ್ಲಾ ದೇವದಾಸಿ ತಾಯಂದಿರಿಗೆ ಮೂರು ಎಕ್ಕರೆ ಭೂಮಿ ನೀಡಿ ಬೋರವೆಲ್ ಕೊರಸಿಕೊಡಬೇಕು.ಪ್ರತ್ಯೇಕವಾಗಿ ದೇವದಾಸಿ ಮಹಿಳಾ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ದೇವದಾಸಿಯರನ್ನೆ ಅಧ್ಯಕ್ಷಳಾಗಿ ನೇಮಿಸಬೇಕು.ಸ್ವಯಂ ಉದ್ಯೋಗ ಕೈಗೊಳ್ಳಲು 75% ಸಬ್ಸಿಡಿ25% ಸಾಲದಂತೆ ಹತ್ತುಲಕ್ಷದವರೆಗೆ ಸರ್ಕಾರ ಸಾಲನೀಡಬೇಕು.ನಮಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕು.ನಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉಚಿತವಾಗಿ ಕೊಡಬೇಕು.ನಮ್ಮ ಮಕ್ಕಳಿಗೆ ಸರ್ಕಾರದ ಕೆಲಸಗಳನ್ನು ಮೀಸಲಿಡಬೇಕು.ದೇವದಾಸಿ ಪದ್ದತಿ ತೊಡೆದು ಹಾಕಲು ಕಠಿಣವಾದ ಕಾನೂನು ತರಬೇಕು.ನಮಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಇವು ನಮ್ಮ ಬೇಡಿಕೆಗಳು. ಇವುಗಳ ಪರವಾಗಿ ರಾಜ್ಯಮಟ್ಟದಲ್ಲಿ ಹಲವಾರು ಬಾರಿ ಹೋರಾಟ ಮಾಡಿ ಮನವಿ ಕೊಟ್ಟರು ಸರ್ಕಾರಗಳು ಇದಕ್ಕೆ ಸ್ಪಂದಿಸುತ್ತಿಲ್ಲ ಬರೀ ಆಶ್ವಾಸನೆಗಳನ್ನು ಮಾತ್ರ ಕೊಡುತ್ತಿದೆ.
10) ಕೊನೆಯದಾಗಿ ಯುವ ಹೋರಾಟಗಾರರಿಗೆ ಏನು ಹೇಳಲು ಬಯಸುತ್ತೀರಿ…?
ರೇ::-ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ.ಪ್ರಸ್ತುತ ಹೋರಾಟಗಳು ಬೇರೆಬೇರೆ ವಿಂಗಡಣೆಯಾಗಿವೆ ಈಗಾದರೆ ಹೋರಾಟಕ್ಕೆ ಶಕ್ತಿ ಬರುವುದಿಲ್ಲ.ಎಲ್ಲರೂ ಒಗ್ಗಟ್ಟಾಗಬೇಕಿದೆ.ಮಾರ್ಕ್ ವಾದ.ಗಾಂಧಿವಾದ.ಅಂಬೇಡ್ಕರ್ ವಾದ.ಲೋಹಿಯಾವಾದ.ಸಮಾಜವಾದ.ಲೆನಿನ್ ವಾದ.ಎಡಪಂಥೀಯ.ಸ್ತ್ರೀ ವಾದ ಹೀಗೆ ಜನಪರ ವಾದಗಳ ಸಿದ್ದಾಂತಗಳು ಒಂದಾಗಿ ಒಂದೆ ವೇದಿಕೆಯಲ್ಲಿ ಬಂದಾಗ ಹೆಚ್ಚು ಶಕ್ತಿಯುತವಾಗಿ ಹೋರಾಟ ಬಲಿಷ್ಟಗೊಳ್ಳುತ್ತದೆ.ಪ್ರಸ್ತುತ ಫ್ಯಾಸಿಸ್ಟ್ ಆಳ್ವೆಕೆಯಲ್ಲಿ ಕೋಮುವಾದಿಗಳ ಕೋಟೆಯಲ್ಲಿ “ಕೆಂಪು ಮತ್ತು ನೀಲಿ” ಒಂದಾಗಲೇಬೇಕಿದೆ.ನಮ್ಮ ಹೋರಾಟ ನಿಸ್ವಾರ್ಥ ವಾಗಿರಲಿ.ಎಂತಹದ್ದೆ ಸಂದರ್ಭದಲ್ಲಿಯೂ ನಾವು ಎಂಜಲು ಆಸೆಗೆ ಒಳಗಾಗದೆ ಹೋರಾಟಕ್ಕೆ ಅಣಿಯಾಗಿ ಚಳುವಳಿಯನ್ನು ಮುನ್ನೆಡೆಸಬೇಕಿದೆ.ಯುವಶಕ್ತಿಯಿಂದ ಮಾತ್ರ ಇಂತಹ ಅನಿಷ್ಟ ಪದ್ದತಿಗಳು ಕೊನೆಯಾಗಲು ಸಾಧ್ಯ.ಯುವಕರು ಒಂದಾಗಿ ಹೋರಾಟಗಳನ್ನು ಮಾಡಬೇಕಿದೆ.
Translation:
Influenced and guided by Hindu religious beliefs, in India, dalits, women and the poor have been oppressed. Hinduism has drafted its own laws in terms of the devadasi system to control dalit women. That poverty and disability costs marriage prospects or having only daughters is a problem are but a few reasons given to justify dedicating innocent girls to a deity. The rationale provided for dedication is that these girls would fill the void of not having a male hair and take up the family responsibilities.
Saundatti Yellamma, Huligemma temples in Hulige of Koppala, Badami Banashankari in Bagalkot, Ucchangemma in Uchangidurga, Chandragutti in Shivamogga are a few religious centers in Karnataka that gives birth to devadasis. These women who bear children outside marriage are locally called soole, basavi, jogamma, matangi etc…Women from the madiga caste are the victims of this system. The system is very much in practice. They live with everyday humiliation. Their stories are moving. There seems to be no end to the tears of devadasis. The negligence on the governments’ part has kept this system alive.
Renukamma continues to live as a devadasi and has been a strong voice against the devadasi system; she was born in a village called Kunduru in the Davanagere district. Hanumappa and Malavva, her biological parents had seven daughters. They got six daughters married and decided to dedicate the youngest, Renukamma as a Basavi to the goddess Yellamma. Renukamma took over the responsibilities of the family. Later on, she herself gave birth to two daughters and one son.
To provide education to her children, Renukamma begs and works as a daily wage labourer. Stepping away from sex work she continues to work as a wage labourer and is very active in unionising devadasis. Through helping devadasi women in forming self-help groups, she is struggling to make the voices of devadasi women and their children reach the ears of governments; she also is part of several social movements.
Movement for special reservations for devadasis, identification and housing, are a few movements she is an active member of. In collaboration with several Non Governmental Organisations and people’s movements, she has been fighting for the abolition of devadasi system. Though an illiterate, she has inculcated dalit-communist and feminist ideologies and has thrown away the beads that were tied around her neck during her dedication as a devadasi; she has broken off the alter of the goddess that every devadasi has, declaring the devadasi system as a plan by men to sexually exploit women’s bodies. Renukamma is at the forefront of the dalit and progressive movements in Davanagere. Discarding the age old traditions and turning towards a scientific outlook, she comes across as an astute social scientist.
In this interview, Renukamma shared several of her experiences.
Huchangi Prasad (HP): Why were you dedicated as a Devadasi ?
Renukamma (R): That’s a long story. I was just seven or eight years old when I was dedicated as a basavi. I didn’t even know what was happening. I have a very foggy memory of it. My mother had seven daughters. Once all six of my sisters were married off, Murugendranna, son of the gowda (headman/landlord) of the village told my parents to dedicate me to the goddess. Since my parents didn’t have any sons and were in need of someone to take care of them in their old age, they were suggested not to marry me off but dedicate me. My parents were convinced and they took me to the hill of Yellamma and they tied the beads around my neck. Four years after this, I started to menstruate and Murugendrappa came to me with a saree, one thousand rupees cash and a tali. Father took the money, mother took the saree and the tali fell around my neck.
HP: When did you realise that the devadasi system was wrong?
R: The gowda’s son who tied a tali around my neck used me sexually till he lost his appetite for me and went after another devadasi; he never came back to me. My parents had died by then. I lived alone in my house. The headmen in the village had their eyes on me. Women in the village would humiliate me by calling me names like soole, mindri, Hadragitti (derogatory terms used for sex workers). I was stripped and physically abused in public for every other thing. No one came for my help. I was lonely. I would just wipe my tears off. I had no one to talk to. That is when I felt that being a devadasi is disgusting. Devadasi means, sexual abuse of innocent girls. It is a religious abuse by devils in human forms feeding on our bodies.
HP: What are you doing now to earn your livelihood?
R: I used to be an agricultural labourer. Whenever I would get time I used to make baskets. I’ve also worked as a domestic help in rich households. I used to beg on Tuesdays and Fridays carrying the altar of the devi. I have stopped it now. I lead an independent and self-sufficient life and work as a labourer. I will not sell my body. Many people invited me to work as a sex worker in several places. I am not interested in it.
HP: What was your experience as a devadasi?
R: My life is like sleeping on the bed of thorns, getting bitten by poisonous snakes, getting stabbed by sharp knives. It is filled with pain and trouble. After Murugeppa left me, I maintained a relationship with a muslim man in the neighboring village. I had three children with him. I never did sex work. I go to the fields in the morning and get back only in the evening. I work hard. The society still looks at me like a sex worker. For a long time I had no one around me and thus villagers would break into my house and beat me up for every little issue. They used to verbally abuse my children. My children have lived a helpless life. The man who is like my husband visits me just once a month. He doesn’t give me money. He in fact takes every penny I have got. I have now kept him at a distance. He doesn’t come here. I no longer fear society. I now retaliate. If things go too far I directly go to the police. I now unionise all the devadasis in the village and fight against our oppression. One of my daughters has studied engineering, another daughter is studying BSc and my son is studying Bcom in Bengaluru. Irrespective of the painful life I live, I am happy that I could provide education to my children.
HP: How were you influenced by communist and feminist ideologies?
R: Back then, Papmapati had contested elections from the communist party and won from Davanagere as MLA. The workers union leader HK Ramachandrappa was a leader of the municipality. They conducted a three days long training camp in Davanagere. By then I was already collecting devadasi women into SHGs and was organising movements; they took me to this camp. The ideological histories, lives of the poor, the differences between the haves and havenots, solutions for the problems and several other things influenced me. I redeemed myself. I decided that there is no god. I finally removed and threw away the beads that were tied around my neck; I threw away the altar. I have been involved myself in the people’s movements ever since. The same people who were humiliating me calling me a prostitute, are now appreciating my work. People who stripped me naked are now turning to me to get their problems resolved. Times change for everyone. We just have to wait. I am living with the people’s movement.
HP: Have devadasis received any facilities from the government?
R: The government does not see. We get fifteen hundred rupees. Money is given to help with the weddings of the devadasi children. Some don’t even receive it. Government gives fifty thousand rupees to help the self-employed, out of which only ten thousand rupees is given as a subsidy and the rest is in the form of a loan. The banks spring out hundreds of rules and end up cancelling the loans. NGOs claim to be helping us and end up mismanaging government’s funds. Government officers are returning the funds meant for us to the women’s commission. There is no land, there is no house. Many devadasis continue to live in huts. People’s representatives make false promises and win elections. Whatever we get now is the result of years of struggles.
HP: Has the devadasi system fully been abolished?
R: No! It has not. Even to this day it very much exists. In Uchangidurga, on the hill during the hunnime festival and on Tuesdays and Fridays, dedication of girls to the goddess happens openly. The government has not made any stringent laws. They haven’t thought about it either. This system is continuing as if it is an unwritten law. Every village in Karnataka and north Karnataka has many devadasis in every village and the number of devadasis has also been increasing every year.
HP: How is your movement now?
R: My movement is not limited only to devadasi women. It’s movement is for the homeless, women beggars and rag pickers, it’s against atrocities on dalits, on dalit women, on minorities, it’s for adivasis, nomadic tribes, workers and women in distress, it’s against bad governance, communalism and casteism. I have dedicated my entire life to the movement.
HP: What are your demands from the government?
R: Every devadasi mother must be given three acres of land with borewells in them. A devadasi women development corporation with devadasi women as its stakeholders must be established. The government must provide ten lakh rupees in form of seventy five percent subsidy and twenty five percent of loan to facilitate self employment. We need reservations. Our children must be given government jobs. A stringent law to abolish the devadasi system must be made. We must be provided with free medical facilities. These are our demands. We have protested several times at the state level and have submitted our demands. Governments have not done anything about them other than making false promises.
HP: Lastly, what do you have to say to the young activists?
R: It is only through movements that one can claim their rights. Right now movements are all divided and this division pulls the spirit of movements down. We have to come together. Gandhian, marxist, ambedkarite, lohiaite, socialism, leninism, left and feminism have to come together. The red and blue have to come together in today’s fascist times. Let our movement be free from egos. We cannot be pulled by money and stay dedicated to the movement. It is only the youth who can fight what we are up against.
This article has been translated into English by Yogesh S.
Huchangi Prasad is a writer, activist, and poet.
Disclaimer: The views expressed in this article are the writer's own, and do not necessarily represent the views of the Indian Writers' Forum.
Courtesy: Indian Cultural Forum
Get the latest reports & analysis with people's perspective on Protests, movements & deep analytical videos, discussions of the current affairs in your Telegram app. Subscribe to NewsClick's Telegram channel & get Real-Time updates on stories, as they get published on our website.